2005ರಲ್ಲಿ, ಟಾಟಾ ಮೋಟಾರ್ಸ್ ದಂತಕತೆಯಾದ ಟಾಟಾ ಏಸ್ ಎನ್ನುವ ವಾಹನವನ್ನು ಪರಿಚಯಿಸಿತ್ತು; ಈ ಸಣ್ಣ ವಾಣಿಜ್ಯ ವಾಹನದ ಶೀಘ್ರವೇ ಭಾರತದಲ್ಲಿ ನಂಬರ್ 1 ಮಾರಾಟವಾಗುವ ಮಿನಿ ಟ್ರಕ್ ಆಯಿತು. ಅಂದಿನಿಂದ, 22 ಲಕ್ಷಕ್ಕೂ ಅಧಿಕ ಟಾಟಾ ಏಸ್ಗಳು ಕಳೆದ 15 ವರ್ಷಗಳಲ್ಲಿ ಮಾರಾಟವಾಗಿವೆ. ಈ ಜನಪ್ರಿಯ ಸರಣಿಯನ್ನು ‘ಸಣ್ಣ ಆನೆ’ ಎಂದೂ ಕರೆಯಲಾಗುತ್ತಿದ್ದು, ಲಕ್ಷಾಂತರ ಉದ್ಯಮಗಳು ಬೆಳೆಯಲು ನೆರವಾಗಿದೆ.
ಟಾಟಾ ಏಸ್ನ ಸಿಎನ್ಜಿ ವೇರಿಯೆಂಟ್ ಅನ್ನು 2008ರಲ್ಲಿ ಬಿಡುಗಡೆ ಮಾಡಲಾಗಿದೆ ಮತ್ತು ಅದಕ್ಕೂ ಸಮಾನ ಆಸಕ್ತಿ ವ್ಯಕ್ತವಾಗಿದೆ.
ಟಾಟಾ ಏಸ್ ಗೋಲ್ಡ್ ಸಿಎನ್ಜಿ ಬಿಎಸ್-6 ಈಗ ಅತ್ಯಧಿಕ ಮೈಲೇಜ್, ಉತ್ತಮ ಪಿಕಪ್ ಮತ್ತು ಹೆಚ್ಚು ಭಾರ ಹೊರುವ ಸಾಮರ್ಥ್ಯ, ಹೆಚ್ಚು ಅನುಕೂಲ, ಕಡಿಮೆ ನಿರ್ವಹಣ ವೆಚ್ಚ ಮತ್ತು ಅಧಿಕ ಲಾಭಗಳ ಜೊತೆಗೆ ಬರುತ್ತಿದೆ.