ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ಅವಲೋಕನ

2005ರಲ್ಲಿ, ಟಾಟಾ ಮೋಟಾರ್ಸ್ ಸಣ್ಣ ವಾಣಿಜ್ಯ ವಾಹನದ ಉದ್ಯಮ ಪ್ರವೇಶಿಸುವ ಪ್ರಥಮ ಪ್ರಯತ್ನವಾಗಿ ಟಾಟಾ ಏಸ್ ಎನ್ನುವ ವಾಹನವನ್ನು ಪರಿಚಯಿಸಿತ್ತು. ಅದು ಭಾರತೀಯ ಮಾರುಕಟ್ಟೆಯಲ್ಲಿ ಕೊನೆಯ ಹಂತದ ಸಾಗಾಟ ವ್ಯವಸ್ಥೆಯಲ್ಲಿ ಕ್ರಾಂತಿಯನ್ನೇ ಮಾಡಿದೆ. ಮೊದಲ ಮಾರಾಟದಿಂದ, ಟಾಟಾ ಏಸ್ 22 ಲಕ್ಷಕ್ಕೂ ಅಧಿಕ ಉದ್ಯಮಿಗಳ ನಂಬಿಕಾರ್ಹ ಸಹಭಾಗಿಯಾಗಿದೆ ಮತ್ತು ದೇಶದಲ್ಲಿ ಏಕೈಕ ಅತಿದೊಡ್ಡ ವಾಣಿಜ್ಯ ವಾಹನ ಬ್ರಾಂಡ್ ಆಗಿ ಬೆಳೆದಿದೆ. ಸ್ವಯಂ ಉದ್ಯೋಗಕ್ಕೆ ಬಳಸುವ ವಾಹನವಾಗಿ ತನ್ನ ಗ್ರಾಹಕರಿಗೆ ಬಹಳಷ್ಟು ಸಾಮಾಜಿಕ ಮತ್ತು ಆರ್ಥಿಕ ಲಾಭಗಳನ್ನೂ ಟಾಟಾ ಏಸ್ ನೀಡಿದೆ.

ತಮ್ಮ ಸಮರ್ಪಿತ ಗ್ರಾಹಕರಿಗಾಗಿ ಪ್ರವರ್ತಕ ಮತ್ತು ಅನ್ವೇಷಕ ಉತ್ಪನ್ನಗಳನ್ನು ಒದಗಿಸುವ ತನ್ನ ದಂತಕತೆಯನ್ನು ಮುಂದುವರಿಸುತ್ತಾ, ಟಾಟಾ ಮೋಟಾರ್ಸ್ ಈಗ ಟಾಟಾ ಏಸ್ ಗೋಲ್ಡ್ ಡೀಸೆಲ್, ಪೆಟ್ರೋಲ್ ಮತ್ತು ಸಿಎನ್ಜಿ ವೈವಿಧ್ಯಗಳನ್ನು ಬಿಎಸ್VI ತಂತ್ರಜ್ಞಾನದ ಜೊತೆಗೆ ಪರಿಚಯಿಸುತ್ತಿದೆ. ಟಾಟಾ ಏಸ್ ಗೋಲ್ಡ್ ಹೊಸ ಪೆಟ್ರೋಲ್ ಪವರ್ ಟ್ರೈನ್ ಮೂಲಕ ತನ್ನ ಗ್ರಾಹಕರ ಹೆಚ್ಚು ಆದಾಯ ಗಳಿಕೆಗೆ ನೆರವಾಗಲು ಅತ್ಯುತ್ತಮ ಮೌಲ್ಯದ ಪ್ರತಿಪಾದನೆಯನ್ನು ಒದಗಿಸುವುದನ್ನು ಮುಂದುವರಿಸಿದೆ.

ಯುಎಸ್ಪಿ :

  • ಪವರ್ ಪ್ಯಾಕ್ಡ್ ಎಂಜಿನ್, 22 Kw (30ಎಚ್ಪಿ) ಪವರ್ ಮತ್ತು 55ಎನ್ಎಂ ಟಾರ್ಕ್ ನೀಡುತ್ತದೆ
  • 750 ಕೆಜಿಯ ಪೇಲೋಡ್
  • ಅಧಿಕ ಇಂಧನ ಕ್ಷಮತೆಗಾಗಿ ಗೇರ್ ಶಿಫ್ಟ್ ಅಡ್ವೈಸರ್ ಮತ್ತು ಈಕೋ ಸ್ವಿಚ್
  • ಡಿಜಿಟಲ್ ಡಿಸ್ಪ್ಲೇ ಕ್ಲಸ್ಟರ್
  • ಗುಣಲಕ್ಷಣಗಳು- ದೊಡ್ಡ ಲಾಕ್ ಮಾಡಬಹುದಾದ ಗ್ಲವ್ ಬಾಕ್ಸ್, ಯುಎಸ್ಬಿ ಚಾರ್ಜರ್
  • 2 ವರ್ಷಗಳ ವಾರಂಟಿ / 72000 ಕಿಮೀಗಳು

ಅಳವಡಿಕೆಗಳು: ಹಣ್ಣುಗಳು ಮತ್ತು ತರಕಾರಿಗಳು, ಪೀಠೋಪಕರಣಗಳು, ಗ್ರಾಹಕ ಉತ್ಪನ್ನಗಳು, ಬಾಟಲಿ ನೀರು, ಗ್ಯಾಸ್ ಸಿಲಿಂಡರ್ ಗಳು, ಎಫ್ಎಂಸಿಜಿ, ಹಾಲಿನ ಡೈರಿ ಉತ್ಪನ್ನಗಳು, ತಂಪು ಪಾನೀಯಗಳು, ಜವಳಿಗಳು, ಬೇಕರಿ, ಫಾರ್ಮಾ, ಟೆಂಟ್ ಹೌಸ್ ಮತ್ತು ಕ್ಯಾಟರಿಂಗ್, ಪ್ಲಾಸ್ಟಿಕ್ ಗಳು, ಬಿಡಿ ಭಾಗಗಳ ವಿತರಣೆ ಮತ್ತು ತ್ಯಾಜ್ಯ ನಿರ್ವಹಣೆಗೂ ಬಳಸಬಹುದಾಗಿದೆ.

ಎಕ್ಸ್ ಶೋರೂಂ ಬೆಲೆ*

* ತೋರಿಸಿರುವ ಬೆಲೆಗಳು ಸೂಚಕ ಮತ್ತು ಬದಲಾವಣೆಗೆ ಒಳಪಟ್ಟಿವೆ

ಟಾಟಾ ಏಸ್ ಗೋಲ್ಡ್ ಪೆಟ್ರೋಲ್