ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ಸಿಎಕ್ಸ್ ಅವಲೋಕನ ಪುಟ

ಸುಮಾರು 16 ವರ್ಷಗಳಿಂದ 23 ಲಕ್ಷಕ್ಕೂ ಹೆಚ್ಚು ಮೊದಲ ಬಾರಿಯ ನವೋದ್ಯಮಿಗಳಿಗೆ ಟಾಟಾ ಏಸ್ ಮೊದಲ ಆಯ್ಕೆಯಾಗಿದೆ. ಈಗ, ಬಿಲಿಯನ್ ಹೊಸ ಕನಸು ಪೂರೈಸುವ ಇನ್ನೊಂದು ಹೊಚ್ಚಹೊಸ ಪ್ರಯಾಣದ ಆರಂಭಕ್ಕೆ ಚಾಲನೆ.

ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ಸಿಎಕ್ಸ್ ಲಕ್ಷಾಂತರ ಭಾರತೀಯ ನವೋದ್ಯಮಿಗಳ ಆಕಾಂಕ್ಷೆಗಳನ್ನು ಮುನ್ನಡೆಸಲು ಸಿದ್ಧವಾಗಿದೆ. ರೂ.7500 ರ ಕಡಿಮೆ ಇಎಂಐ ಜೊತೆಗೆ ರೂ.3.99 ಲಕ್ಷ ಆಕರ್ಷಕ ಬೆಲೆಯು ತಮ್ಮ ಸಿವಿ ಉದ್ಯಮವನ್ನು ಆರಂಭಿಸಲು ಮೊದಲ ಬಾರಿಯ ಬಳಕೆದಾರರಿಗೆ ಖರೀದಿಯನ್ನು ಸುಲಭಗೊಳಿಸಲಿದೆ.

ತನ್ನ ವರ್ಗದಲ್ಲಿ ಕಡಿಮೆ ಆಪರೇಟಿಂಗ್ ವೆಚ್ಚಗಳು ಮತ್ತು ಅತ್ಯಧಿಕ ಆದಾಯ ಗಳಿಕೆಯ ಸಾಮರ್ಥ್ಯ ಒದಗಿಸುವ ಮೂಲಕ ತಮ್ಮ ವ್ಯವಹಾರವನ್ನು ಹೆಚ್ಚಿಸಿಕೊಳ್ಳಲು ನೆರವಾಗುವ ಮೂಲಕ, ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ಸಿಎಕ್ಸ್ ಪ್ರತಿಯೊಬ್ಬರ ಕನಸನ್ನು ನನಸಾಗಿಸಲಿದೆ.

ಯುಎಸ್‌ಪಿ (USP) :

  • ಶಕ್ತಿಶಾಲಿ ಎಂಜಿನ್, 18.38 kW ನೀಡುತ್ತದೆ, ಅಧಿಕ ವೇಗಕ್ಕಾಗಿ ಶಕ್ತಿ ವೇಗದ ಪ್ರಯಾಣಗಳಿಗಾಗಿ 55 Nm ಪಿಕಪ್ ನೀಡುತ್ತದೆ
  • ಅಧಿಕ ಇಂಧನ ದಕ್ಷತೆಗಾಗಿ ಗಿಯರ್ ಶಿಫ್ಟ್ ಅಡ್ವೈಸರ್ ಮತ್ತು ಇಕೋ ಸ್ವಿಚ್
  • ಡಿಜಿಟಲ್ ಡಿಸ್‌ಪ್ಲೇ ಕ್ಲಸ್ಟರ್
  • ವೈಶಿಷ್ಟ್ಯಗಳು - ದೊಡ್ಡ ಲಾಕ್ ಮಾಡಬಹುದಾದ ಗ್ಲೋವ್ ಬಾಕ್ಸ್, ಯುಎಸ್‌ಬಿ ಚಾರ್ಜರ್
  • 2 ವರ್ಷಗಳ ವಾರಂಟಿ/ 72000 Kms

ಬಳಕೆಗಳು: ಹಣ್ಣು ಮತ್ತು ತರಕಾರಿ, ಪೀಠೋಪಕರಣ, ಗ್ರಾಹಕ ಉತ್ಪನ್ನಗಳು, ಬಾಟಲಿ ನೀರು, ಗ್ಯಾಸ್ ಸಿಲಿಂಡರ್‌ಗಳು, ಎಫ್‌ಎಂಸಿಜಿ, ಹಾಲು ಮತ್ತು ಡೈರಿ ಉತ್ಪನ್ನಗಳು, ತಂಪು ಪಾನೀಯಗಳು, ಟೆಕ್ಸ್‌ಟೈಲ್, ಬೇಕರಿ, ಫಾರ್ಮಾ, ಟೆಂಟ್‌ ಹೌಸ್ ಮತ್ತು ಕೇಟರಿಂಗ್, ಪ್ಲಾಸ್ಟಿಕ್ಸ್, ಗುಜರಿಯ ವಿತರಣೆ, ತ್ಯಾಜ್ಯ ನಿರ್ವಹಣೆ ಮತ್ತು ಇನ್ನೂ ಹಲವು ಬಳಕೆಗಳು

Product Image