ಟಾಟಾ ಮೋಟಾರ್ಸ್ ಲಿಮಿಟೆಡ್ ( ಇಲ್ಲಿಂದ ಮುಂದೆ ಟಿಎಂಎಲ್ ಎಂದು ಕರೆಯಲಾಗುವುದು) ನಿಮ್ಮ ಖಾಸಗಿ ದತ್ತಾಂಶದ ಖಾಸಗಿತನ ಮತ್ತು ಭದ್ರತೆ ರಕ್ಷಣೆ ಮಾಡುವುದಕ್ಕೆ ಬದ್ಧವಾಗಿದೆ. ನಿಮ್ಮ ಖಾಸಗಿ ಡಾಟಾವನ್ನು ಪ್ರಕ್ರಿಯೆಗೊಳಿಸುವ ಸಂದರ್ಭದಲ್ಲಿ ಖಾಸಗಿತನದ ರಕ್ಷಣೆಗೆ ಅತಿಮುಖ್ಯ ಕಾಳಜಿ ನೀಡಿ ವಿಶೇಷವಾಗಿ ಗಮನಹರಿಸಲಾಗುತ್ತದೆ. ನಾವು ಸಂಗ್ರಹಿಸಿದ ಖಾಸಗಿ ಡಾಟಾವನ್ನು ಅನ್ವಯಿಸುವ ಕಾನೂನು ಸೌಲಭ್ಯಗಳಿಗೆ ತಕ್ಕಂತೆ ಪ್ರಕ್ರಿಯೆಗೊಳಿಸುತ್ತೇವೆ.
ಗೌಪ್ಯತೆ ನೀತಿಯ ಅತಿ ಮುಖ್ಯ ಉದ್ದೇಶವೇ ನಾವು ಸಂಗ್ರಹಿಸಿದ ಖಾಸಗಿ ಡಾಟಾದ ಬಗ್ಗೆ ನಿಮಗೆ ಮಾಹಿತಿ ನೀಡುವುದು. ಅಂತಹ ಡಾಟಾವನ್ನು ಸಂಗ್ರಹಿಸುವ ಉದ್ದೇಶ ಮತ್ತು ಅದರ ಬಳಕೆ, ಅಂತಹ ಡಾಟಾವನ್ನು ಪ್ರಕ್ರಿಯೆಗೊಳಿಸುವುದು ಮತ್ತು ನಮ್ಮೊಂದಿಗೆ ಹಂಚಿದ ಅಂತಹ ಖಾಸಗಿ ಡಾಟಾದ ಕುರಿತು ನಿಮ್ಮ ಹಕ್ಕುಗಳನ್ನು ರಕ್ಷಿಸುವುದು ಆಗಿದೆ. ಈ ಗೌಪ್ಯತೆ ನೀತಿ ಮುಂದುವರಿದು ನಿಮ್ಮ ಖಾಸಗಿ ಡಾಟಾ ರಕ್ಷಣೆಗೆ ಸಂಬಂಧಿಸಿದ ನಿಮ್ಮ ಹಕ್ಕುಗಳನ್ನು ಮುಂದಿಡುತ್ತದೆ. ಈ ಖಾಸಗಿ ನೀತಿಯು ಟಿಎಂಎಲ್ ಸಂಗ್ರಹಿಸುವ ನಿಮ್ಮ ಕುರಿತ ಮಾಹಿತಿ, ಆ ಮಾಹಿತಿಯನ್ನು ಹೇಗೆ ಬಳಸುವುದು, ನಿರ್ವಹಣೆ, ಹಂಚಿಕೊಳ್ಳುವುದು, ರಕ್ಷಿಸುವುದು ಮತ್ತು ನೀವು ಅದನ್ನು ಹೇಗೆ ಅಪ್ಡೇಟ್ ಮಾಡುವುದು ಎನ್ನುವುದನ್ನು ವಿವರಿಸುತ್ತದೆ. ಟಿಎಂಎಲ್ ಯುರೋಪಿಯನ್ ಆರ್ಥಿಕ ಕ್ಷೇತ್ರದಿಂದ (ಇಇಎ) ಯಾವುದೇ ರೀತಿಯಲ್ಲಿ, ಎಲೆಕ್ಟ್ರಾನಿಕ್ ಅಥವಾ ಕಾಗದದ ಮೂಲಕ, ಪಡೆದ ಎಲ್ಲಾ ಖಾಸಗಿ ನೀತಿಗೂ ಇದು ಅನ್ವಯಿಸುತ್ತದೆ. ಕೆಳಗೆ ಪೋಸ್ಟ್ ಮಾಡಿದ ದಿನಾಂಕದಿಂದ ಇದು ಅನ್ವಯಿಸುತ್ತದೆ ಮತ್ತು ಅನ್ವಯಿಸುವ ದಿನದಿಂದ ಮಾಹಿತಿಯನ್ನು ನಾವು ಬಳಸುವುದಕ್ಕೆ ಅವಕಾಶ ಕೊಡುತ್ತದೆ.
ಗೌಪ್ಯತೆ ನೀತಿಯಲ್ಲಿ ನೀಡದೆ ಇರುವ ಹೊರತಾಗಿ ಸಾಮಾನ್ಯವಾಗಿ, ನೀವು ನಿಮ್ಮ ಖಾಸಗಿ ಗುರುತಿನ ಹೊರತಾಗಿ ನಮ್ಮ ವೆಬ್ಸೈಟ್ಗೆ ಭೇಟಿಕೊಡುವುದು/ ಬಳಸಬಬಹುದು. ಟಿಎಂಎಲ್ ನಿಮಗೆ ನಿಮ್ಮ ಗುರುತು ನೀಡದೆಯೇ ವೆಬ್ಸೈಟ್ ಬಳಸುವ ಆಯ್ಕೆ ಕೊಡುತ್ತದೆ, ಅದು ಕಾನೂನಾತ್ಮಕ ಮತ್ತು ಪ್ರಾಯೋಗಿಕವಾಗಿರುತ್ತದೆ. ವೆಬ್ಸೈಟ್ನ ನಿರ್ದಿಷ್ಟ ವಿಭಾಗಗಳಿಗೆ ನಿಮ್ಮ ಅಗತ್ಯವನ್ನು ಸಮರ್ಥವಾಗಿ ಒದಗಿಸಲು ಮತ್ತು ನೀವು ಭೇಟಿ ನೀಡಿದ ಸಮಯದಲ್ಲಿ ನೀವು ವಿನಂತಿಸಿದ ಉತ್ಪನ್ನಗಳು, ಸೇವೆಗಳು ಅಥವಾ ಮಾಹಿತಿಗೆ ಸಂಬಂಧಿಸಿ ಸೂಕ್ತವಾಗಿ ಮಾಹಿತಿ ಒದಗಿಸಲು ನಿಮ್ಮ ಖಾಸಗಿ ಡಾಟಾದ ಅಗತ್ಯ ಬರಬಹುದು. ನಮ್ಮ ವೆಬ್ಸೈಟ್ ಬಳಕೆಗೆ ಸಂಬಂಧಿಸಿ ಕೆಳಗೆ ಸೂಚಿಸಿದಂತೆ ನಿಯಮಗಳು ಮತ್ತು ಷರತ್ತುಗಳನ್ನು ಓದಬೇಕು ಮತ್ತು ಅರ್ಥಮಾಡಿಕೊಳ್ಳಬೇಕು ಎಂದು ನಿಮಗೆ ವಿನಂತಿಸಲಾಗಿದೆ. ವೆಬ್ಸೈಟ್ನ ಬಳಕೆಯಲ್ಲಿ ನೀವು ಈ ನಿಯಮಗಳನ್ನು ಬೇಷರತ್ ಆಗಿ ಒಪ್ಪಬೇಕು ಎಂದು ಹೇಳಲಾಗಿದೆ. ನಮ್ಮ ಗೌಪ್ಯತೆ ನೀತಿಯ ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಂಡಲ್ಲಿ ಮಾತ್ರವೇ ಈ ವೆಬ್ಸೈಟನ್ನು ಪ್ರವೇಶಿಸಬೇಕು. ಅಲ್ಲದೆ ಟಾಟಾ ಮೋಟಾರ್ಸ್ ಲಿಮಿಟೆಡ್ಗೆ ನೀವು ಒದಗಿಸಿದ ಎಲ್ಲಾ ಖಾಸಗಿ ವಿಷಯಗಳನ್ನು ಖಾಸಗಿ ನೀತಿಗೆ ತಕ್ಕಂತೆ ಬಳಸಿಕೊಳ್ಳಲು ನೀವು ಸ್ವಯಂ ನಿರ್ಧಾರದಿಂದ ಒಪ್ಪಿಗೆ ನೀಡಿರಬೇಕು. ನಮ್ಮ ಖಾಸಗಿ ನೀತಿಯ ನಿಯಮಗಳನ್ನು ನೀವು ಒಪ್ಪದೆ ಇದ್ದಲ್ಲಿ, ಅಥವಾ ವೆಬ್ಸೈಟ್ಗಳಿಗೆ ಸಂಬಂಧಿಸಿ ಯಾವುದೇ ಕಾರಣದಿಂದ ನೀವು ಅತೃಪ್ತರಾಗಿದ್ದಲ್ಲಿ/ ಅಥವಾ ಅಲ್ಲಿನ ಯಾವುದೇ ವಿಚಾರದಲ್ಲಿ ನೀವು ವಬ್ಸೈಟನ್ನು ಹೆಚ್ಚುವರಿಯಾಗಿ ಬಳಸುವುದನ್ನು ತಡೆಯಲಾಗಿದೆ.
ಈ ಗೌಪ್ಯತೆ ನೀತಿ ಓದುವಂತೆ ನಾವು ನಿಮಗೆ ಪ್ರೋತ್ಸಾಹ ನೀಡುತ್ತೇವೆ.
ನಾವು ಸಂಗ್ರಹಿಸುವ ಖಾಸಗಿ ಡಾಟಾ
ಖಾಸಗಿ ಡಾಟಾವು ಟಿಎಂಎಲ್ ನೀವು ಯಾರು ಎಂದು ತಿಳಿದುಕೊಳ್ಳಲು ಮತ್ತು ಅದನ್ನು ನಿಮ್ಮನ್ನು ಗುರುತಿಸಲು, ಸಂಪರ್ಕಿಸಲು ಅಥವಾ ಪತ್ತೆ ಮಾಡಲು (ಉದಾ. ಹೆಸರು, ವಯಸ್ಸು, ಲಿಂಗ, ಮೈಲಿಂಗ್ ವಿಳಾಸ, ಟೆಲಿಫೋನ್ ನಂಬರ್ ಮತ್ತು ಇಮೇಲ್ ವಿಳಾಸ) ನೆರವಾಗುತ್ತದೆ. ಸಮೀಕ್ಷೆಗೆ ಪ್ರತಿಕ್ರಿಯೆಯಾಗಿ ನೀವು ಖಾಸಗಿ ಮಾಹಿತಿ ದಾಖಲಿಸಿದರೆ, ಕಾರ್ಯಕ್ರಮಗಳಿಗೆ ನೋಂದಣಿ ಮಾಡಿಕೊಂಡಿದ್ದಲ್ಲಿ, ಖಾಸಗಿ ಸೇವೆಗಳಿಗೆ ನೋಂದಣಿ ಮಾಡಿಕೊಮಡಲ್ಲಿ, ಉತ್ಪನ್ನದ ಮಾಹಿತಿ ಬೇಡಿದಾಗ ಅಥವಾ ನಮ್ಮ ಸೇವೆಗಳನ್ನು ಬಳಸಿದಾಗ ಅಥವಾ ಗ್ರಾಹಕ ಸೇವೆಯನ್ನು ಬಯಸಿ ನಿಮ್ಮ ಖಾಸಗಿ ಮಾಹಿತಿಯನ್ನು ನೀವು ಒದಗಿಸಿದಾಗ ನಾವು ಸಂಗ್ರಹಿಸುತ್ತೇವೆ. ನಾವು ನಿಮ್ಮ ಖಾಸಗಿ ಮಾಹಿತಿಯಲ್ಲಿ ನಿಮ್ಮ ಹೆಸರು, ವಿಳಾಸ, ಜಿಪ್ ಕೋಡ್, ಫೋನ್ ನಂಬರ್, ಇಮೇಲ್ ವಿಳಾಸ, ಐಪಿ ವಿಳಾಸ, ಸ್ಥಳ ವಿವರ, ನಿಮ್ಮ ಸಾಧನದ ಮಾಹಿತಿ ಇತ್ಯಾದಿಯನ್ನು ಸಂಗ್ರಹಿಸಬಹುದು. ಟಿಎಂಎಲ್ ಸಂಗ್ರಹಿಸಿರುವ ನಿಮ್ಮ ಎಲ್ಲಾ ಖಾಸಗಿ ವಿವರಗಳು ನೇರವಾಗಿ ನಿಮ್ಮಿಂದಲೇ ಬಂದಿರಬೇಕು ಎಂದಿಲ್ಲ. ಅದನ್ನು ,ಉದಾಹರಣೆಗೆ, ನಿಮ್ಮ ಉದ್ಯೋಗಿಯಿಂದ ಅಥವಾ ನೀವು ಸೇರಿರುವ ಸಂಸ್ಥೆಯಿಂದ ಬಂದಿರಬಹುದು. ಆದರೆ, ಟಿಎಂಎಲ್ ನಿಮ್ಮ ಖಾಸಗಿ ಮಾಹಿತಿಯನ್ನು ಈ ಸೈಟ್ ಜೊತೆಗೆ ಸಂಪರ್ಕ ಸಾಧಿಸಿದಾಗ ಮತ್ತು/ ಅಥವಾ ಈ ಸೈಟ್ನಲ್ಲಿ ನೀಡಲಾದ ಸೇವೆಯನ್ನು ಬಳಸಿಕೊಂಡಾಗ ಸಂಗ್ರಹಿಸುತ್ತದೆ.
ನಿಮ್ಮ ಸಂಬಂಧಿಕರು, ಸ್ನೇಹಿತರು ಅಥವಾ ಯಾವುದೇ ಇತರ ಮೂರನೇ ವ್ಯಕ್ತಿಗಳಿಗೆ ಸಂಬಂಧಿಸಿದ ನಿಮ್ಮ ಖಾಸಗಿ ಡೇಟಾವನ್ನು ನಮಗೆ ಒದಗಿಸುವ ಮೂಲಕ, / ಈ ಗೌಪ್ಯತೆ ನೀತಿಯಲ್ಲಿ ಇಳಿಸಲಾದ ಉದ್ದೇಶಗಳಿಗೆ ಮತ್ತು ಬಳಕೆಗಾಗಿ ಅಂತಹ ಖಾಸಗಿ ಡೇಟಾವನ್ನು ನಮಗೆ ಬಹಿರಂಗಪಡಿಸಲು ಅಂತಹ ಸಂಬಂಧಿಕರು, ಸ್ನೇಹಿತರು ಅಥವಾ ಮೂರನೇ ವ್ಯಕ್ತಿಗಳಿಂದ ನೀವು ಸೂಕ್ತ ಒಪ್ಪಿಗೆಯನ್ನು ಸ್ವೀಕರಿಸಿದ್ದೀರಿ ಎಂದು ನೀವು ಖಚಿತಪಡಿಸುತ್ತೀರಿ ಮತ್ತು ದೃಢಪಡಿಸುತ್ತೀರಿ.
ನಮ್ಮ ಗೌಪ್ಯತೆ ನೀತಿಯ ನಿಯಮಗಳು ಮತ್ತು ಷರತ್ತುಗಳಿಗೆ ನೀವು ಸಮ್ಮತಿಸಿದರೆ ಮತ್ತು ನೀವು ಒದಗಿಸಿದ ಎಲ್ಲಾ ಮಾಹಿತಿಯನ್ನು ಅದರ ಗೌಪ್ಯತೆ ನೀತಿಗೆ ಅನುಗುಣವಾಗಿ ಬಳಸಲು ಟಾಟಾ ಮೋಟಾರ್ಸ್ ಲಿಮಿಟೆಡ್ಗೆ ಒಪ್ಪಿಗೆ ಮತ್ತು ಅಧಿಕಾರ ನೀಡಿದರೆ ಮಾತ್ರ ಈ ವೆಬ್ಸೈಟ್ ಅನ್ನು ಬಳಸಬಹುದು. ನಮ್ಮ ಗೌಪ್ಯತಾ ನೀತಿಯ ನಿಯಮಗಳನ್ನು ನೀವು ಒಪ್ಪದಿದ್ದರೆ ಅಥವಾ ವೆಬ್ಸೈಟ್ಗಳು ಮತ್ತು / ಅಥವಾ ಅದರ ಯಾವುದೇ ವಿಷಯಗಳಿಗೆ ಸಂಬಂಧಿಸಿದಂತೆ ಯಾವುದೇ ಕಾರಣಕ್ಕಾಗಿ ನಿಮಗೆ ತೃಪ್ತಿ ಇಲ್ಲದಿದ್ದರೆ, ವೆಬ್ಸೈಟ್ ಅನ್ನು ಇನ್ನಷ್ಟು ಬಳಸುವುದನ್ನು ನಿಷೇಧಿಸಲಾಗಿದೆ.
ಸಮುದಾಯ ಚರ್ಚೆ ಮಂಡಳಿಗಳು
ಆನ್ಲೈನ್ ಸಮುದಾಯ ಚರ್ಚಾ ಮಂಡಳಿಗಳು, ಬ್ಲಾಗ್ಗಳು ಅಥವಾ ಇತರ ಕಾರ್ಯವಿಧಾನಗಳ ಮೂಲಕ ಬಳಕೆದಾರರಿಗೆ ಪರಸ್ಪರ ಸಂವಹನ ನಡೆಸುವ ಅವಕಾಶವನ್ನು ನಮ್ಮ ವೆಬ್ಸೈಟ್ ನೀಡುತ್ತದೆ. ಅಂತಹ ಚರ್ಚಾ ಬೋರ್ಡ್ಗಳಲ್ಲಿ ಪೋಸ್ಟ್ ಮಾಡಿರುವುದನ್ನು ನಾವು ಶೋಧಿಸಿ ಬಳಸುವುದಿಲ್ಲ ಅಥವಾ ಮೇಲ್ವಿಚಾರಣೆ ಮಾಡುವುದಿಲ್ಲ. ಈ ಚರ್ಚಾ ಬೋರ್ಡ್ಗಳಲ್ಲಿ ಪೋಸ್ಟ್ ಮಾಡಲು ನೀವು ಆಯ್ಕೆ ಮಾಡಿದರೆ, ಯಾವುದೇ ಖಾಸಗಿ ವಿವರಗಳನ್ನು ಬಹಿರಂಗಪಡಿಸುವ ಮೊದಲು ಜಾಗರೂಕತೆ ವಹಿಸಬೇಕು. ಏಕೆಂದರೆ ಅಂತಹ ಮಾಹಿತಿಯನ್ನು ನಮ್ಮ ಗೌಪ್ಯತೆ ನೀತಿಯಿಂದ ರಕ್ಷಿಸಲಾಗುವುದಿಲ್ಲ ಅಥವಾ ಅಂತಹ ಪೋಸ್ಟಿಂಗ್ನಲ್ಲಿ ನಿಮ್ಮ ಖಾಸಗಿ ವಿವರಗಳನ್ನು ಬಹಿರಂಗಪಡಿಸಲು ಆಯ್ಕೆ ಮಾಡಿದರೆ ನಾವು ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ, ನೀವು ನಮ್ಮ ವೆಬ್ಸೈಟ್ನಲ್ಲಿ ಪೋಸ್ಟ್ ಮಾಡುವ ಖಾಸಗಿ ವಿವರಗಳು ಇಂಟರ್ನೆಟ್ ಮೂಲಕ ಪ್ರಪಂಚದಾದ್ಯಂತ ಲಭ್ಯವಿರಬಹುದು. ಇತರರಿಂದ ಅಂತಹ ಮಾಹಿತಿಯ ಬಳಕೆ ಅಥವಾ ದುರುಪಯೋಗವನ್ನು ನಾವು ತಡೆಯಲು ಸಾಧ್ಯವಿಲ್ಲ.
TML ವೆಬ್ಸೈಟ್ಗಳು ಇತರ ವೆಬ್ಸೈಟ್ಗಳಿಗೆ ಲಿಂಕ್ಗಳನ್ನು ಹೊಂದಿರಬಹುದು. ಅಂತಹ ವೆಬ್ಸೈಟ್ಗಳ ಗೌಪ್ಯತೆ ಅಥವಾ ವಿಷಯಕ್ಕೆ TML ಜವಾಬ್ದಾರನಾಗಿರುವುದಿಲ್ಲ:
ಖಾಸಗಿ ಮಾಹಿತಿಯನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ
ನಾವು ಖಾಸಗಿ ವಿವರಗಳನ್ನು ಬಳಸಿಕೊಳ್ಳಲು ನಮಗೆ ಸೂಕ್ತ ಕಾರಣಗಳು ಇದ್ದರೆ ಮಾತ್ರ ಬಳಸಿಕೊಳ್ಳುತ್ತೇವೆ. ನಾವು ನಿಮ್ಮ ಡೇಟಾವನ್ನು ಈ ಒಂದು ಅಥವಾ ಹೆಚ್ಚಿನ ಕಾರಣಗಳಿಗಾಗಿ ಮಾತ್ರ ಬಳಸುತ್ತೇವೆ:
ನಿಮ್ಮ ಮಾಹಿತಿಯನ್ನು ಬಳಕೆ ಮಾಡುವಾಗ ನಮ್ಮಲ್ಲಿ ಚಾಲ್ತಿಯಲ್ಲಿರುವ ಗೌಪ್ಯತೆಯ ಸೂಚನೆ ಅನ್ವಯಿಸುತ್ತದೆ. TML ನಮ್ಮ ಸಾಮಾನ್ಯ ವ್ಯಾಪಾರ ಬಳಕೆಗಾಗಿ ನಮಗೆ ಒದಗಿಸಿದ ಮಾಹಿತಿಯನ್ನು ಬಳಸುತ್ತದೆ. ಅದರಲ್ಲಿ ಈ ಕೆಳಗಿನ ಉದ್ದೇಶಗಳನ್ನು ಇರಬಹುದು:
ನಿಮಗಾಗಿ ಸೇವೆಗಳನ್ನು ನಿರ್ವಹಿಸಲು ಅಥವಾ ನಿಮ್ಮ ವಿಚಾರಣೆಗಳಿಗೆ ಪ್ರತಿಕ್ರಿಯಿಸಲು ಸಮಂಜಸವಾಗಿ ಅಗತ್ಯವಿರುವ ಅಂತಹ ಮಾಹಿತಿಯನ್ನು ಮಾತ್ರ ಸಂಗ್ರಹಿಸಲು ನಾವು ಪ್ರಯತ್ನಿಸುತ್ತೇವೆ. ನೀವು ಒದಗಿಸುವ ಮಾಹಿತಿಯು ನಿಖರ, ಸಂಪೂರ್ಣ ಮತ್ತು ಪ್ರಸ್ತುತವಾಗಿದೆ ಎಂದು ಖಚಿತಪಡಿಸುವುದು ನಿಮ್ಮದೇ ಜವಾಬ್ದಾರಿಯಾಗಿರುತ್ತದೆ.
ನಮ್ಮ ವೆಬ್ಸೈಟ್, ಮೊಬೈಲ್ ಅಪ್ಲಿಕೇಶನ್ ಅಥವಾ ಯಾವುದೇ ಇತರ ಮೋಡ್ನಲ್ಲಿ ನಿಮ್ಮ ಸಂಪರ್ಕ ವಿವರಗಳನ್ನು ನೀಡುವ ಮೂಲಕ, ಇಮೇಲ್, ಎಸ್ಎಂಎಸ್, ಫೋನ್ ಕರೆ ಮತ್ತು/ಅಥವಾ ವಾಟ್ಸಪ್ ಮೂಲಕ ಟಿಎಂಎಲ್ ಅಥವಾ ಅದರ ಯಾವುದೇ ಸಹವರ್ತಿ/ಅಂಗಸಂಸ್ಥೆಯಿಂದ ಸಂವಹನವನ್ನು ಸ್ವೀಕರಿಸಲು ನೀವು ಒಪ್ಪುವಿರಿ.
ಟಿಎಂಎಲ್ ಸಂಪೂರ್ಣ ಅಥವಾ ಟಿಎಂಎಲ್ ವೆಬ್ಸೈಟ್ನ ಯಾವುದೇ ಭಾಗಕ್ಕೆ ಮತ್ತು ಸಂಬಂಧಿತ ಸೇವೆಗಳಿಗೆ ಅಥವಾ ಅದರ ಯಾವುದೇ ಭಾಗಕ್ಕೆ ಯಾವುದೇ ಸೂಚನೆಯಿಲ್ಲದೆ ಯಾವುದೇ ಸಮಯದಲ್ಲಿ ನಿಮ್ಮ ಪ್ರವೇಶ ಮುಕ್ತಾಯಗೊಳಿಸುವ ಹಕ್ಕನ್ನು ತನ್ನ ಸ್ವಂತ ವಿವೇಚನೆಯಿಂದ ಕಾಯ್ದಿರಿಸಿದೆ.
ನಾವು ನಿಮ್ಮ ಖಾಸಗಿ ಮಾಹಿತಿ ಹಂಚಿಕೊಳ್ಳುವಾಗ
ಸೇವೆಗಳನ್ನು ಒದಗಿಸಲು ಅಥವಾ ನಮ್ಮ ವ್ಯಾಪಾರ ಕಾರ್ಯಾಚರಣೆಗಳನ್ನು ನಡೆಸಲು ಅಗತ್ಯವಾದಾಗ ಟಿಎಂಎಲ್ ಖಾಸಗಿ ಡೇಟಾವನ್ನು ಹಂಚಿಕೊಳ್ಳುತ್ತದೆ ಅಥವಾ ಬಹಿರಂಗಪಡಿಸುತ್ತದೆ. ಟಿಎಂಎಲ್ ನಿಮ್ಮ ಖಾಸಗಿ ಡೇಟಾವನ್ನು ಹೊರಗೆ ವರ್ಗಾಯಿಸಲು ಬಯಸಿದರೆ, ಟಿಎಂಎಲ್ ನಿಮ್ಮ ಗೌಪ್ಯತೆ ಹಕ್ಕುಗಳನ್ನು ರಕ್ಷಿಸುವುದನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಸಾಕಷ್ಟು ಸುರಕ್ಷತೆಯನ್ನು ವಹಿಸಿದೆ ಎನ್ನುವುದನ್ನು ಖಾತರಿಪಡಿಸುತ್ತದೆ. ನಾವು ನಿಮ್ಮ ಬಗ್ಗೆ ಯಾವುದೇ ವಿಶೇಷ ವಿಭಾಗದಲ್ಲಿ ಖಾಸಗಿ ಡೇಟಾ (ನಿಮ್ಮ ಜನಾಂಗ ಅಥವಾ ಜನಾಂಗೀಯತೆ, ಧಾರ್ಮಿಕ ಅಥವಾ ನೈತಿಕ ನಂಬಿಕೆಗಳು, ಲೈಂಗಿಕ ಜೀವನ, ಲೈಂಗಿಕ ದೃಷ್ಟಿಕೋನ, ರಾಜಕೀಯ ಅಭಿಪ್ರಾಯಗಳು, ಟ್ರೇಡ್ ಯೂನಿಯನ್ ಸದಸ್ಯತ್ವ, ನಿಮ್ಮ ಆರೋಗ್ಯ ಮತ್ತು ಆನುವಂಶಿಕ ಮತ್ತು ಬಯೋಮೆಟ್ರಿಕ್ ಡೇಟಾದ ಬಗ್ಗೆ ವಿವರ ಸೇರಿದಂತೆ) ಸಂಗ್ರಹಿಸುವುದಿಲ್ಲ. ಕ್ರಿಮಿನಲ್ ಅಪರಾಧಗಳು ಮತ್ತು ನಿಮ್ಮ ಮೇಲೆ ಆರೋಪಗಳಿದ್ದರೆ, ಆ ಬಗ್ಗೆಯೂ ವಿವರ ಸಂಗ್ರಹಿಸುವುದಿಲ್ಲ.
ಈ ಸೈಟ್ನಲ್ಲಿ ಜಾಹೀರಾತು ಮಾಡಲಾದ ಸಿಬ್ಬಂದಿ ಅವಕಾಶಗಳಿಗಾಗಿ ಅಥವಾ ನಮ್ಮ ಅಂಗಸಂಸ್ಥೆಗಳ ವೆಬ್ಸೈಟ್ನಲ್ಲಿ ಜಾಹೀರಾತು ಮಾಡಲಾದ ಅವಕಾಶಗಳಿಗೆ ಸಂಬಂಧಿಸಿದಂತೆ ಟಿಎಂಎಲ್ ನಿಮ್ಮ ಸಮ್ಮತಿಯೊಂದಿಗೆ ತನಗೆ ಸಂಬಂಧವಿಲ್ಲದ ತೃತೀಯ ಪಕ್ಷದ ಗ್ರಾಹಕರಿಗೆ ನಿಮ್ಮ ಬಗ್ಗೆ ಮಾಹಿತಿಯನ್ನು ಟಿಎಂಎಲ್ ಬಹಿರಂಗಪಡಿಸಬಹುದು. ಉದಾಹರಣೆಗೆ-
ನಾವು ಖಾಸಗಿ ಡೇಟಾವನ್ನು ಎಲ್ಲಿ ಸಂಗ್ರಹಿಸುತ್ತೇವೆ ಮತ್ತು ಪ್ರಕ್ರಿಯೆಗೊಳಿಸುತ್ತೇವೆ
ಟಿಎಂಎಲ್ ಒಂದು ಜಾಗತಿಕ ಸಂಸ್ಥೆಯಾಗಿ, ನಾವು ಸಂಗ್ರಹಿಸುವ ಮಾಹಿತಿಯನ್ನು ಈ ಗೌಪ್ಯತೆ ಸೂಚನೆ ಮತ್ತು ಡೇಟಾ ಇರುವಲ್ಲೆಲ್ಲಾ ಅನ್ವಯಿಸುವ ಕಾನೂನಿನ ಅವಶ್ಯಕತೆಗಳ ಪ್ರಕಾರ ಪ್ರಕ್ರಿಯೆಗೊಳಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಟಿಎಂಎಲ್ ಜಾಗತಿಕವಾಗಿ ಇರುವ ನಮ್ಮ ಕಚೇರಿಗಳಲ್ಲಿ ನೆಟ್ವರ್ಕ್ಗಳು, ಡೇಟಾಬೇಸ್ಗಳು, ಸರ್ವರ್ಗಳು, ಸಿಸ್ಟಮ್ಗಳು, ಬೆಂಬಲ ಮತ್ತು ಸಹಾಯ ಡೆಸ್ಕ್ಗಳನ್ನು ಹೊಂದಿದೆ. ನಮ್ಮ ವ್ಯಾಪಾರ, ಕಾರ್ಯಪಡೆ ಮತ್ತು ಗ್ರಾಹಕರ ಅಗತ್ಯ ಪೂರೈಸಲು ನಾವು ಕ್ಲೌಡ್ ಹೋಸ್ಟಿಂಗ್ ಸೇವೆಗಳು, ಸೇವೆ ಒದಗಿಸುವವರು ಮತ್ತು ವಿಶ್ವಾದ್ಯಂತ ಇರುವ ತಂತ್ರಜ್ಞಾನ ಬೆಂಬಲದಂತಹ ತೃತೀಯ ಪಕ್ಷದ ಜೊತೆಗೆ ಸಹಕರಿಸುತ್ತೇವೆ. ಅನ್ವಯಿಸುವ ಕಾನೂನಿನ ಪ್ರಕಾರ ಖಾಸಗಿ ಡೇಟಾವನ್ನು ಪ್ರಕ್ರಿಯೆಗೊಳಿಸಿ, ಭದ್ರವಾಗಿಸಲಾಗಿದೆ ಮತ್ತು ವರ್ಗಾಯಿಸಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ.
ಟಿಎಂಎಲ್ ನಿಮ್ಮ ಖಾಸಗಿ ಡೇಟಾವನ್ನು ಯಾರಿಗೂ ಮಾರಾಟ ಮಾಡುವುದಿಲ್ಲ ಅಥವಾ ಬಾಡಿಗೆಗೆ ನೀಡುವುದಿಲ್ಲ. ನೀವು ವಿನಂತಿಸಿದ ಉತ್ಪನ್ನ ಅಥವಾ ಸೇವೆಯನ್ನು ಒದಗಿಸಲು ಕೆಲವು ಸಂದರ್ಭಗಳಲ್ಲಿ, ಅಗತ್ಯವಿದ್ದರೆ ನಾವು ಟಿಎಂಎಲ್ ಅಥವಾ ತೃತೀಯ ಪಕ್ಷಗಳಿಗೆ ನಿಮ್ಮ ಖಾಸಗಿ ಡೇಟಾ ಬಹಿರಂಗಪಡಿಸಬಹುದು ಅಥವಾ ವರ್ಗಾಯಿಸಬೇಕಾಗಬಹುದು. ನಾವು ಖಾಸಗಿ ಮಾಹಿತಿಗಳನ್ನು ಇತರ ದೇಶಗಳಿಗೆ ವರ್ಗಾಯಿಸಿದಾಗ ಅವುಗಳು ನಿಮ್ಮ ತವರು ದೇಶದಲ್ಲಿರುವ ಡೇಟಾ ಗೌಪ್ಯತೆ ರಕ್ಷಣೆಯಂತಹ ಕಾನೂನುಗಳನ್ನು ಹೊಂದಿರದೆ ಇರಬಹುದು. ಆಗ ನಾವು ಸೂಕ್ತವಾದ ಮಟ್ಟದ ಡೇಟಾ ಗೌಪ್ಯತೆ ರಕ್ಷಣೆ ಒದಗಿಸಲು ಕ್ರಮ ಕೈಗೊಳ್ಳುತ್ತೇವೆ. ಉದಾಹರಣೆಗೆ, ನಿಮ್ಮ ಖಾಸಗಿ ಮಾಹಿತಿಯನ್ನು ಸ್ವೀಕರಿಸುವವರು ಅದರ ರಕ್ಷಣೆ ಖಚಿತಪಡಿಸಿರುವ ಗ್ಯಾರಂಟಿ ಕೊಡಲು ನಾವು ಅನುಮೋದಿತ ಒಪ್ಪಂದದ ಷರತ್ತುಗಳು, ಬಹುಪಕ್ಷೀಯ ಡೇಟಾ ವರ್ಗಾವಣೆ ಒಪ್ಪಂದಗಳು, ಇಂಟ್ರಾಗ್ರೂಪ್ ಒಪ್ಪಂದಗಳನ್ನು ಮಾಡಿಕೊಳ್ಳುತ್ತೇವೆ.
ನಾವು ಖಾಸಗಿ ಡೇಟಾವನ್ನು ಹೇಗೆ ಸುರಕ್ಷಿತವಾಗಿರಿಸುತ್ತೇವೆ
TMಟಿಎಂಎಲ್ ನಿಮ್ಮ ಖಾಸಗಿ ಡೇಟಾ ರಕ್ಷಿಸಲು ಸೂಕ್ತ ತಂತ್ರಜ್ಞಾನಗಳು ಮತ್ತು ಕಾರ್ಯವಿಧಾನಗಳನ್ನು ಬಳಸುತ್ತದೆ. ನಮ್ಮ ಮಾಹಿತಿ ಭದ್ರತಾ ನೀತಿಗಳು ಮತ್ತು ಕಾರ್ಯವಿಧಾನಗಳು ವ್ಯಾಪಕವಾಗಿ ಅಂಗೀಕರಿಸಲ್ಪಟ್ಟ ಅಂತರರಾಷ್ಟ್ರೀಯ ಮಾನದಂಡಗಳೊಂದಿಗೆ ನಿಕಟವಾಗಿ ಜೋಡಿಸಲ್ಪಟ್ಟಿವೆ ಮತ್ತು ನಮ್ಮ ವ್ಯಾಪಾರದ ಅಗತ್ಯತೆ, ತಂತ್ರಜ್ಞಾನದಲ್ಲಿನ ಬದಲಾವಣೆಗಳು ಮತ್ತು ನಿಯಂತ್ರಕ ಅಗತ್ಯತೆಗಳನ್ನು ಪೂರೈಸಲು ನಿಯಮಿತವಾಗಿ ಪರಿಶೀಲಿಸಲಾಗುತ್ತದೆ ಮತ್ತು ನವೀಕರಿಸಲಾಗುತ್ತದೆ. ಉದಾಹರಣೆಗೆ,
ಕುಕೀಸ್
ಕಾಲಕಾಲಕ್ಕೆ, ನಾವು ‘ಕುಕೀ’ ಎಂಬ ಪ್ರಮಾಣಿತ ತಂತ್ರಜ್ಞಾನವನ್ನು ಬಳಸಬಹುದು. ಕುಕೀ ಎನ್ನುವುದು ಕಂಪ್ಯೂಟರ್ ಅಥವಾ ಇತರ ಸಾಧನದಲ್ಲಿ ಇರಿಸಲಾದ ಸಣ್ಣ ಪಠ್ಯ ಫೈಲ್ ಆಗಿದೆ ಮತ್ತು ಬಳಕೆದಾರ ಅಥವಾ ಸಾಧನವನ್ನು ಗುರುತಿಸಲು ಮತ್ತು ಮಾಹಿತಿಯನ್ನು ಸಂಗ್ರಹಿಸಲು ಬಳಸಲಾಗುತ್ತದೆ. ಕುಕೀಗಳನ್ನು ಸಾಮಾನ್ಯವಾಗಿ ಅವುಗಳ ಕಾರ್ಯ ಮತ್ತು ಯೋಜಿತ ಉದ್ದೇಶವನ್ನು ಅವಲಂಬಿಸಿ ನಾಲ್ಕು ವರ್ಗಗಳಲ್ಲಿ ನಿಯೋಜಿಸಲಾಗಿದೆ: ಅಗತ್ಯ ಕುಕೀಗಳು, ಕಾರ್ಯಕ್ಷಮತೆ ಕುಕೀಸ್, ಕ್ರಿಯಾತ್ಮಕ ಕುಕೀಗಳು ಮತ್ತು ಮಾರ್ಕೆಟಿಂಗ್ ಉದ್ದೇಶಗಳಿಗಾಗಿ ಕುಕೀಗಳು. ಇವುಗಳಲ್ಲಿ ಒಂದನ್ನು ನಿಯೋಜಿಸಲಾಗುತ್ತದೆ. ಕುಕೀಯು ನಿಮ್ಮ ಹಾರ್ಡ್ ಡ್ರೈವ್ನಿಂದ ಯಾವುದೇ ಇತರ ಡೇಟಾವನ್ನು ಹಿಂಪಡೆಯಲು ಸಾಧ್ಯವಿಲ್ಲ, ಕಂಪ್ಯೂಟರ್ ವೈರಸ್ಗಳನ್ನು ರವಾನಿಸಲು ಅಥವಾ ನಿಮ್ಮ ಇಮೇಲ್ ವಿಳಾಸವನ್ನು ಸೆರೆಹಿಡಿಯಲು ಸಾಧ್ಯವಿಲ್ಲ. ಪ್ರಸ್ತುತ, ವೆಬ್ಸೈಟ್ಗಳು ಬಳಕೆದಾರರ ಭೇಟಿಯನ್ನು ಹೆಚ್ಚಿಸಲು ಕುಕೀಗಳನ್ನು ಬಳಸುತ್ತವೆ; ಸಾಮಾನ್ಯವಾಗಿ, ಕುಕೀಗಳು ಬಳಕೆದಾರರ ಐಡಿ ಮತ್ತು ಪಾಸ್ವರ್ಡ್ ಅನ್ನು ಸುರಕ್ಷಿತವಾಗಿ ಸಂಗ್ರಹಿಸಬಹುದು, ಮುಖಪುಟಗಳನ್ನು ವೈಯಕ್ತೀಕರಿಸಬಹುದು ಮತ್ತು ಸೈಟ್ನ ಯಾವ ಭಾಗಗಳಿಗೆ ಭೇಟಿ ನೀಡಲಾಗಿದೆ ಎಂಬುದನ್ನು ಗುರುತಿಸಬಹುದು. ಕುಕೀಯನ್ನು ಇರಿಸಿದಾಗ ನಿಮಗೆ ತಿಳಿಸಲು ನಿಮ್ಮ ಬ್ರೌಸರ್ ಅನ್ನು ಹೊಂದಿಸಲು ಸಾಧ್ಯವಿದೆ. ಈ ರೀತಿಯಾಗಿ ಕುಕೀಯನ್ನು ಸ್ವೀಕರಿಸಬೇಕೆ ಎಂದು ನಿರ್ಧರಿಸಲು ನಿಮಗೆ ಅವಕಾಶವಿದೆ. ನಮ್ಮ ಸಂದರ್ಶಕರು ಈ ವೆಬ್ ಸೈಟ್ ಅನ್ನು ಹೇಗೆ ಮತ್ತು ಯಾವಾಗ ಬಳಸುತ್ತಾರೆ ಎಂಬುದನ್ನು ತೋರಿಸುವ ಮೂಲಕ, ನಮ್ಮ ಸೈಟ್ ಅನ್ನು ನಿರಂತರವಾಗಿ ಸುಧಾರಿಸಲು ಕುಕೀ ನೀಡುವ ಮಾಹಿತಿಯು ನಮಗೆ ನೆರವಾಗುತ್ತದೆ. ನೀವು ನಿರ್ದಿಷ್ಟವಾಗಿ ನಮಗೆ ಹೆಚ್ಚುವರಿ ಮಾಹಿತಿ ನೀಡದ ಹೊರತು ಕುಕೀಗಳು ನಿಮ್ಮ ಬಗ್ಗೆ ಖಾಸಗಿಯಾಗಿ ಏನನ್ನೂ ಹೇಳುವುದಿಲ್ಲ. ನಮ್ಮಿಂದ ಅಥವಾ ತೃತೀಯ ಪಕ್ಷದಿಂದ ಪಡೆದ ಯಾವುದೇ ಖಾಸಗಿ ಗುರುತಿಸಬಹುದಾದ ಮಾಹಿತಿಯೊಂದಿಗೆ ಟಿಎಂಎಲ್ ನಮ್ಮ ಕುಕೀ ಮಾಹಿತಿಯನ್ನು ವಿಲೀನಗೊಳಿಸುವುದಿಲ್ಲ ಅಥವಾ ಸಂಯೋಜಿಸುವುದಿಲ್ಲ.
ನಾವು ಕುಕೀಗಳನ್ನು ಇದಕ್ಕಾಗಿ ಬಳಸಬಹುದು: (i) ವೆಬ್ಸೈಟ್ಗೆ ನಿಮ್ಮ ಭೇಟಿಗಳ ಸಂಖ್ಯೆಯನ್ನು ಎಣಿಸಲು; (ii) ವೆಬ್ಸೈಟ್ ಬಳಕೆಯ ಮೇಲೆ ಅನಾಮಧೇಯ, ಒಟ್ಟು, ಅಂಕಿಅಂಶಗಳ ಮಾಹಿತಿಯನ್ನು ಸಂಗ್ರಹಿಸಲು; (iii) ನಿಮ್ಮ ಅಗತ್ಯ ಅಥವಾ ವೀಕ್ಷಣೆಯ ಇತಿಹಾಸದ ಪ್ರಕಾರ ಸೂಕ್ತವಾದ ವಿಷಯವನ್ನು ಒದಗಿಸಲು; ಮತ್ತು (iv) ನಿಮ್ಮ ಪಾಸ್ವರ್ಡ್ ಅನ್ನು ಉಳಿಸುತ್ತದೆ (ನೀವು ಹಾಗೆ ಮಾಡಲು ಅನುಮತಿಸಿದಾಗ ಮಾತ್ರ). ಅದರ ಮೂಲಕ ನೀವು ನಮ್ಮ ಸೈಟ್ಗಳಿಗೆ ಭೇಟಿ ನೀಡಿದ ಪ್ರತಿ ಬಾರಿ ಅದನ್ನು ಮರು-ನಮೂದಿಸಬೇಕಾಗುವ ಅಗತ್ಯವಿರುವುದಿಲ್ಲ. ನೀವು ಕುಕೀಗಳನ್ನು ಸಹ ನಿಷ್ಕ್ರಿಯಗೊಳಿಸಬಹುದು. ನಿಮ್ಮ ಬ್ರೌಸರ್ ಪ್ರಾಶಸ್ತ್ಯಗಳನ್ನು ಮಾರ್ಪಡಿಸುವ ಮೂಲಕ, ನೀವು ಎಲ್ಲಾ ಕುಕೀಗಳನ್ನು ಸ್ವೀಕರಿಸಬಹುದು ಅಥವಾ ತಿರಸ್ಕರಿಸಬಹುದು ಅಥವಾ ಕುಕೀಯನ್ನು ಹೊಂದಿಸಿದಾಗ ಅಧಿಸೂಚನೆ ವಿನಂತಿಸಬಹುದು.
ಕಟ್ಟುನಿಟ್ಟಾಗಿ ಅಗತ್ಯ ಕುಕೀಸ್
ವೆಬ್ಸೈಟ್ನ ಸರಿಯಾದ ಕಾರ್ಯನಿರ್ವಹಣೆಗೆ ಈ ಕುಕೀಗಳು ಅಗತ್ಯವಾಗಿವೆ, ಉದಾಹರಣೆಗೆ ವಿಷಯವನ್ನು ಪ್ರದರ್ಶಿಸುವುದು, ಲಾಗ್ ಇನ್ ಮಾಡುವುದು, ನಿಮ್ಮ ಸೆಶನ್ ಅನ್ನು ಮೌಲ್ಯೀಕರಿಸುವುದು, ಸೇವೆಗಳಿಗಾಗಿ ನಿಮ್ಮ ವಿನಂತಿಗೆ ಪ್ರತಿಕ್ರಿಯಿಸುವುದು ಮತ್ತು ಇತರ ಕಾರ್ಯಗಳು. ಕುಕೀಗಳ ಬಳಕೆಯನ್ನು ನಿಷ್ಕ್ರಿಯಗೊಳಿಸಲು ಹೆಚ್ಚಿನ ವೆಬ್ ಬ್ರೌಸರ್ಗಳನ್ನು ಹೊಂದಿಸಬಹುದು. ಆದರೆ, ನೀವು ಈ ಕುಕೀಗಳನ್ನು ನಿಷ್ಕ್ರಿಯಗೊಳಿಸಿದರೆ, ನಮ್ಮ ವೆಬ್ಸೈಟ್ನಲ್ಲಿನ ವೈಶಿಷ್ಟ್ಯಗಳನ್ನು ಸರಿಯಾಗಿ ಅಥವಾ ಸಂಪೂರ್ಣವಾಗಿ ಪ್ರವೇಶಿಸಲು ನಿಮಗೆ ಸಾಧ್ಯವಾಗದಿರಬಹುದು.
ಮಕ್ಕಳು
ನಾವು ಮಕ್ಕಳಿಗೆ ನೇರವಾಗಿ ಸೇವೆ ಒದಗಿಸುವುದಿಲ್ಲ ಅಥವಾ ಅವರ ಖಾಸಗಿ ಮಾಹಿತಿಯನ್ನು ಪೂರ್ವಭಾವಿಯಾಗಿ ಸಂಗ್ರಹಿಸುವುದಿಲ್ಲ. ಟಿಎಂಎಲ್ ಸೈಟ್ಗೆ ಮಕ್ಕಳ ಪ್ರವೇಶ ಮತ್ತು ಬಳಕೆಯನ್ನು ಮೇಲ್ವಿಚಾರಣೆ ಮಾಡುವುದು ಸೇರಿದಂತೆ ಅವರ ನಡವಳಿಕೆಗೆ ಎಲ್ಲಾ ಜವಾಬ್ದಾರಿ ಮತ್ತು ಕಾನೂನು ಹೊಣೆಗಾರಿಕೆಯನ್ನು ಪೋಷಕರು ವಹಿಸಿಕೊಂಡರೆ, ನಮ್ಮ ವೆಬ್ಸೈಟ್ ಬಳಸಲು ಮಕ್ಕಳಿಗೆ ಅಧಿಕಾರ ನೀಡಬಹುದು. ಮಗುವಿನ ಖಾಸಗಿ ಡೇಟಾವನ್ನು ಪೋಷಕರ ಒಪ್ಪಿಗೆಯಿಲ್ಲದೆ ಸಂಗ್ರಹಿಸಲಾಗಿದೆ ಎಂದು ಟಿಎಂಎಲ್ ತಿಳಿದುಕೊಂಡರೆ, ಅಂತಹ ಮಾಹಿತಿಯನ್ನು ಅಳಿಸಲು ಟಿಎಂಎಲ್ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬಹುದು. ನಿಮ್ಮ ಮಗು ತನ್ನ/ಅವಳ ಡೇಟಾವನ್ನು ಟಿಎಂಎಲ್ಗೆ ಸಲ್ಲಿಸಿರುವುದು ಕಂಡಲ್ಲಿ, ಮೂಲಕ ವಿನಂತಿಸಿ ಟಿಎಂಎಲ್ನ ಡೇಟಾಬೇಸ್ನಿಂದ ಅಂತಹ ಡೇಟಾವನ್ನು ಅಳಿಸಲು ವಿನಂತಿಸಬಹುದು. ವಿನಂತಿ ಸ್ವೀಕರಿಸಿದ ನಂತರ, ಟಿಎಂಎಲ್ ತನ್ನ ಡೇಟಾಬೇಸ್ನಿಂದ ಅಂತಹ ಮಾಹಿತಿಯನ್ನು ಅಳಿಸುವ ಖಾತರಿ ನೀಡುತ್ತದೆ.
ಪರಿಶೀಲಿಸುವ ಪೋಷಕರ ಒಪ್ಪಿಗೆಯಿಲ್ಲದೆ ಮಕ್ಕಳ ಖಾಸಗಿ ಡೇಟಾ ಸಂಗ್ರಹಿಸಲಾಗಿದೆ ಎಂದು ಟಿಎಂಎಲ್ಗೆ ಅರಿವಾದಲ್ಲಿ, ಅಂತಹ ಮಾಹಿತಿಯನ್ನು ಅಳಿಸಲು ಟಿಎಂಎಲ್ ಸೂಕ್ತ ಕ್ರಮ ಕೈಗೊಳ್ಳಬಹುದು. ಆದರೆ, ನಿಮ್ಮ ಮಕ್ಕಳು ತನ್ನ/ಅವಳ ಡೇಟಾವನ್ನು ಟಿಎಂಎಲ್ ಗೆ ಸಲ್ಲಿಸಿರುವುದು ತಿಳಿದಲ್ಲಿ, ಇಮೇಲ್ ವಿನಂತಿ ಕಳುಹಿಸಿ ಟಿಎಂಎಲ್ಡೇಟಾಬೇಸ್ನಿಂದ ಅಂತಹ ಡೇಟಾವನ್ನು ಅಳಿಸಲು ಕೇಳಿಕೊಳ್ಳಬಹುದು. ವಿನಂತಿ ಸ್ವೀಕರಿಸಿದ ನಂತರ, ಟಿಎಂಎಲ್ ತನ್ನ ಡೇಟಾಬೇಸ್ನಿಂದ ಅಂತಹ ಮಾಹಿತಿಯನ್ನು ಅಳಿಸುವುದನ್ನು ಖಚಿತಪಡಿಸುತ್ತದೆ.
ನಿಮ್ಮ ಹಕ್ಕುಗಳು ಮತ್ತು ನಿಮ್ಮ ಖಾಸಗಿ ಡೇಟಾ
ಮಾಹಿತಿ ಪ್ರವೇಶಿಸುವ ಮತ್ತು ನಿಯಂತ್ರಿಸುವ ನಿಮ್ಮ ಹಕ್ಕನ್ನು ನಾವು ಗೌರವಿಸುತ್ತೇವೆ ಮತ್ತು ಮಾಹಿತಿಗಾಗಿ ವಿನಂತಿಗಳಿಗೆ ನಾವು ಪ್ರತಿಕ್ರಿಯಿಸುತ್ತೇವೆ ಮತ್ತು ಅನ್ವಯವಾಗುವಲ್ಲಿ ನಿಮ್ಮ ಖಾಸಗಿ ಮಾಹಿತಿಯನ್ನು ಸರಿಪಡಿಸುತ್ತೇವೆ, ತಿದ್ದುಪಡಿ ಮಾಡುತ್ತೇವೆ ಅಥವಾ ಅಳಿಸುತ್ತೇವೆ.
ಅಂತಹ ಸಂದರ್ಭಗಳಲ್ಲಿ, ನೀವು ಈ ಹಕ್ಕುಗಳನ್ನು ಚಲಾಯಿಸುವ ಮೊದಲು ನಿಮ್ಮ ಗುರುತಿನ ಪುರಾವೆಯೊಂದಿಗೆ ಪ್ರತಿಕ್ರಿಯಿಸುವ ಅಗತ್ಯವಿದೆ.
ನಿಮ್ಮ ಖಾಸಗಿ ಡೇಟಾವನ್ನು ನಾವು ಎಷ್ಟು ಸಮಯ ಸಂಗ್ರಹಿಸಿಡುತ್ತೇವೆ?
ಕಾನೂನು ಅಥವಾ ವ್ಯಾಪಾರ ಉದ್ದೇಶಗಳಿಗಾಗಿ ನಮಗೆ ಸಮಂಜಸವಾಗಿ ಅಗತ್ಯವಿರುವವರೆಗೆ ನಾವು ಖಾಸಗಿ ಮಾಹಿತಿ ಉಳಿಸಿಕೊಳ್ಳುತ್ತೇವೆ. ಡೇಟಾ ಧಾರಣ ಅವಧಿ ನಿರ್ಧರಿಸುವಲ್ಲಿ, ಟಿಎಂಎಲ್ ಸ್ಥಳೀಯ ಕಾನೂನುಗಳು, ಒಪ್ಪಂದದ ಬಾಧ್ಯತೆಗಳು ಮತ್ತು ನಮ್ಮ ಗ್ರಾಹಕರ ನಿರೀಕ್ಷೆಗಳು ಮತ್ತು ಅವಶ್ಯಕತೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ. ನಮಗೆ ಇನ್ನು ಮುಂದೆ ಖಾಸಗಿ ಮಾಹಿತಿ ಅಗತ್ಯವಿಲ್ಲದಿದ್ದಾಗ, ಅದನ್ನು ಸುರಕ್ಷಿತವಾಗಿ ಅಳಿಸುತ್ತೇವೆ ಅಥವಾ ನಾಶಪಡಿಸುತ್ತೇವೆ.
ಬದಲಾವಣೆಗಳು
ಟಿಎಂಎಲ್ ಕಾಲಕಾಲಕ್ಕೆ ಗೌಪ್ಯತೆ ನೀತಿ ನವೀಕರಿಸಬಹುದು. ಪ್ರಸ್ತುತ ಗೌಪ್ಯತಾ ನೀತಿ ನೋಡಲು ನಮ್ಮ ವೆಬ್ಸೈಟ್ ಅನ್ನು ಆಗಾಗ್ಗೆ ಪರಿಶೀಲಿಸಲು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ಇದರಿಂದ ನಿಮ್ಮ ಮಾಹಿತಿ ಟಿಎಂಎಲ್ ಹೇಗೆ ಬಳಸುತ್ತದೆ ಮತ್ತು ರಕ್ಷಿಸುತ್ತದೆ ಎಂಬುದರ ಕುರಿತು ನಿಮಗೆ ಮಾಹಿತಿ ಇರುತ್ತದೆ. ಈ ನೀತಿಗೆ ಬದಲಾವಣೆಯು ಗಮನಾರ್ಹವಾದಾಗ, ನಾವು ಈ ವೆಬ್ಸೈಟ್ನಲ್ಲಿ ಪ್ರಮುಖ ಸೂಚನೆ ನೀಡುತ್ತೇವೆ ಮತ್ತು ನವೀಕರಿಸಿದ ಪರಿಣಾಮಕಾರಿ ದಿನಾಂಕ ಒದಗಿಸುತ್ತೇವೆ.
ಒದಗಿಸಿದ ಡೇಟಾದ ರಕ್ಷಣೆ
ನಮಗೆ ಒದಗಿಸಲಾದ ನಿಮ್ಮ ಖಾಸಗಿ ಡೇಟಾ ರಕ್ಷಿಸಲು ನಾವು ಕಠಿಣ ಭದ್ರತಾ ಕ್ರಮಗಳನ್ನು ಹೊಂದಿದ್ದೇವೆ. ಎಲ್ಲಾ ಖಾಸಗಿ ಮಾಹಿತಿಯನ್ನು ಸುರಕ್ಷಿತ ರೀತಿಯಲ್ಲಿ ಸಂಗ್ರಹಿಸುತ್ತೇವೆ, ಅದರ ನಷ್ಟ, ದುರುಪಯೋಗ, ತಪ್ಪಾದ ಬಹಿರಂಗಪಡಿಸುವಿಕೆ, ಬದಲಾವಣೆ ಅಥವಾ ನಾಶ ತಡೆಯುತ್ತೇವೆ. ಹೇಳಲಾದ ಭದ್ರತಾ ಕ್ರಮಗಳನ್ನು ನಿಯಮಿತವಾಗಿ ನವೀಕರಿಸಲಾಗುತ್ತದೆ. ಆದರೆ ಯಾವುದೇ ಅನಪೇಕ್ಷಿತ ನಷ್ಟ, ದುರುಪಯೋಗ, ಬದಲಾವಣೆ ಅಥವಾ ಅಂತಹ ಮಾಹಿತಿಯ ಬಹಿರಂಗಪಡಿಸುವಿಕೆ ಸೇರಿದಂತೆ ಖಾಸಗಿ ಮಾಹಿತಿಯ ಇಂಟರ್ನೆಟ್ ಪ್ರಸರಣದ ಸಮಯದಲ್ಲಿ ಭದ್ರತೆಯ ಉಲ್ಲಂಘನೆಗೆ ಟಿಎಂಎಲ್ ಹೊಣೆಗಾರರಲ್ಲ. ಇದಲ್ಲದೆ, ಈ ಗೌಪ್ಯತಾ ನೀತಿಯಲ್ಲಿ ಏನೇ ಇದ್ದರೂ, ಯಾವುದೇ ನಷ್ಟ, ಹಾನಿ ಅಥವಾ ಖಾಸಗಿ ಮಾಹಿತಿಯ ದುರುಪಯೋಗಕ್ಕೆ ಟಿಎಂಎಲ್ ಹೊಣೆಗಾರರಲ್ಲ., ಅಂತಹ ನಷ್ಟ, ಹಾನಿ ಅಥವಾ ದುರುಪಯೋಗವು ತಪ್ಪಿಸಲಾಗದ ಕಾರಣಕ್ಕೆ ಆಗಿದ್ದರೆ ಅಥವಾ ಸಕಾರಣ ನೀಡಲು ಸಾಧ್ಯವಾಗದಿದ್ದರೆ ಟಿಎಂಎಲ್ ಹೊಣೆಗಾರರಲ್ಲ.
ಟಿಎಂಎಲ್ ನಿಮ್ಮ ಖಾಸಗಿ ಡೇಟಾವನ್ನು ಉತ್ತಮ ನಂಬಿಕೆಯಿಂದ ಅಥವಾ ಕಾನೂನು ಬಾಧ್ಯತೆ ಅನುಸರಿಸಲು ಅಗತ್ಯವಿದ್ದಾಗ ಅಥವಾ ಯಾವುದೇ ಕಾನೂನಿನಿಂದ ಅಥವಾ ಯಾವುದೇ ಸಮರ್ಥ ನ್ಯಾಯಾಲಯ ಅಥವಾ ಶಾಸನಬದ್ಧ ಪ್ರಾಧಿಕಾರದ ಆದೇಶದ ಮೂಲಕ ಟಿಎಂಎಲ್ನ ಕಾನೂನು ಹಕ್ಕುಗಳು ಅಥವಾ ಬೌದ್ಧಿಕ ಆಸ್ತಿ ಹಕ್ಕುಗಳನ್ನು ರಕ್ಷಿಸಲು ಮತ್ತು ರಕ್ಷಿಸಲು ಅಗತ್ಯವಿದ್ದಾಗ ಬಹಿರಂಗಪಡಿಸಬಹುದು.
ನಿಮ್ಮ ಹೊಣೆಗಾರಿಕೆ
ಈ ಬಳಕೆಯ ನಿಯಮಗಳಿಗೆ ವಿರುದ್ಧವಾಗಿ ಕಾನೂನುಬಾಹಿರ ಅಥವಾ ನಿಷೇಧಿಸಲಾದ ಯಾವುದೇ ಉದ್ದೇಶಕ್ಕಾಗಿ ನೀವು ವೆಬ್ಸೈಟ್ ಅನ್ನು ಬಳಸುವುದಿಲ್ಲ ಎಂದು ನೀವು ಟಿಎಂಎಲ್ಗೆ ಖಾತರಿ ನೀಡುತ್ತೀರಿ. ನೀವು ಈ ವೆಬ್ಸೈಟ್ಗೆ ಹಾನಿ, ನಿಷ್ಕ್ರಿಯಗೊಳಿಸುವುದು, ಮಿತಿಮೀರಿದ ಬಳಕೆ ಅಥವಾ ದುರ್ಬಲಗೊಳಿಸುವುದು ಅಥವಾ ಯಾವುದೇ ಇತರ ಪಕ್ಷದ ಬಳಕೆಗೆ ಅವಕಾಶ ಕೊಡುವುದು ಮತ್ತು ಈ ವೆಬ್ಸೈಟ್ ಬಳಸುವ ಸಂತೋಷಕ್ಕೆ ಅಡ್ಡಿ ಮಾಡಬಾರದು. ಇದನ್ನು ನೀವು ಮಾರ್ಪಡಿಸಬಾರದು, ನಕಲಿಸಬಾರದು, ವಿತರಿಸಬಾರದು, ಪ್ರಸಾರ ಮಾಡಬಾರದು, ಪ್ರದರ್ಶಿಸಬಾರದು, ಪುನರುತ್ಪಾದಿಸಬಾರದು, ಪ್ರಕಟಿಸಬಾರದು. ಯಾವುದೇ ಮಾಧ್ಯಮದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ನಮ್ಮ ಪೂರ್ವಾನುಮತಿಯಿಲ್ಲದೆ ಟಿಎಂಎಲ್ ವೆಬ್ಸೈಟ್ನಿಂದ ಪಡೆದ ಯಾವುದೇ ಡೇಟಾ, ಸೇವೆಗಳಿಂದ ಮರುಸೃಷ್ಟಿಯ ಕೃತಿಗಳನ್ನು ರಚಿಸಿ, ವರ್ಗಾಯಿಸಿ ಅಥವಾ ಮಾರಾಟ ಮಾಡಬಾರದು. ಖಾಸಗಿ ಮತ್ತು ವಾಣಿಜ್ಯೇತರ ಬಳಕೆಯನ್ನು ಹೊರತುಪಡಿಸಿ ಈ ಸಾಮಗ್ರಿಗಳನ್ನು ಅಥವಾ ಅದರ ಯಾವುದೇ ಭಾಗವನ್ನು ಕಂಪ್ಯೂಟರ್ನಲ್ಲಿ ಸಂಗ್ರಹಿಸಬಾರದು.
ಆಡಳಿತದ ಕಾನೂನು/ ವ್ಯಾಪ್ತಿ
ಈ ಗೌಪ್ಯತಾ ನೀತಿಯು ಭಾರತದ ಕಾನೂನುಗಳಿಂದ ನಿಯಂತ್ರಣಕ್ಕೆ ಒಳಪಟ್ಟಿದೆ; ಮತ್ತು ಮುಂಬೈ (ಭಾರತ) ನ್ಯಾಯಾಲಯಗಳು ಯಾವುದೇ ವಿವಾದವನ್ನು ಎದುರಿಸಲು ವಿಶೇಷ ನ್ಯಾಯವ್ಯಾಪ್ತಿಯನ್ನು ಹೊಂದಿರುತ್ತವೆ.
ಪ್ರಶ್ನೆಗಳು/ ಸಂಪರ್ಕ ಮಾಹಿತಿ
ಈ ಗೌಪ್ಯತಾ ಸೂಚನೆ ನೀತಿಯ ಕುರಿತು ನೀವು ಪ್ರಶ್ನೆಗಳು ಅಥವಾ ಅಭಿಪ್ರಾಯ ಹೊಂದಿದ್ದರೆ, ದಯವಿಟ್ಟು ನಮ್ಮನ್ನು ಇಲ್ಲಿ ಸಂಪರ್ಕಿಸಿ:
ಇಮೇಲ್: dpr@tatamotors.com
ಅನ್ವಯಿಸುವ ದಿನಾಂಕ: 24.03.22