press release
ಪತ್ರಿಕಾ ಬಿಡುಗಡೆ

ಭಾರತದಲ್ಲಿ ಟಾಟಾ ಏಸ್ ಗೋಲ್ಡ್ ಮಿನಿ ಟ್ರಕ್ ಪ್ರಾರಂಭ ಮಾಡಲಾಗಿದೆ; ಬೆಲೆ 3.75 ಲಕ್ಷಗಳು

Released on 13 April, 2018

ಟಾಟಾ ಮೋಟಾರ್ಸ್ ನವೀಕರಿಸಲಾಗಿರುವ ಏಸ್ ಗೋಲ್ಡ್ ಲೈಟ್ ಕಮರ್ಷಿಯಲ್ ವೆಹಿಕಲ್ (ಎಲ್ಸಿವಿ) ಯನ್ನು ದೇಶದಲ್ಲಿ ₹3.75 ಲಕ್ಷ ಬೆಳೆಯಲ್ಲಿ (ಇಎಕ್ಸ್ ಶೋರೂಮ್, ದೆಲ್ಲಿ), ಪ್ರಾಂಭಿಸಿದ್ದು, ಈ ಸಾಲಿಗೆ ಹೊಸ ಪ್ರೀಮಿಯಮ್ ವೈವಿಧ್ಯವನ್ನು ಸೇರಿಸಿದೆ. ಈ ಟಾಟಾ ಏಸ್ ಗೋಲ್ಡ್ ಮಿನಿ- ಟ್ರಕ್ಗೆಹೊಸ ಆರ್ಕ್ಟಿಕ್ ವ್ಹಾಯ್ಟ್ ಶೇಡ್ ಅನ್ನು ಸೇರಿಸಲಾಗಿದೆ, ಹಾಗೇ ಹೆಚ್ಚಿನ ದಕ್ಷತೆ, ಸುರಕ್ಷತೆ ಹಾಗೂ ಆರಾಮದಾಯಕತೆಯನ್ನು ನೀಡುತ್ತದೆ. ಹೊಸ ಏಸ್ ಗೋಲ್ಡ್ ಟಾಟಾ ಏಸ್ ರೇಂಜ್ ಅಡಿಯಲ್ಲಿ ಹಲವಾರು ಕೊಡುಗೆಗಳನ್ನು ಸೇರಿಸಿದೆ ಹಾಗೂ ಕಂಪನಿಯ ಡೀಲರ್ಶಿಪ್ ಪ್ಯಾನ್ ಇಂಡಿಯಾದಾದ್ಯಂತ ಇಂದಿನಿಂದ ಮಾರಾಟವಾಗಲಿದೆ. ಈ ವಿಭಾಗವನ್ನು ಏಸ್ನೊಂದಿಗೆ 2005ರಲ್ಲಿ ಪ್ರಾರಂಭಿಸಿದ ನಂತರ , ಆಟೋ ದೈತ್ಯ ಪ್ರಸ್ತುತದಲ್ಲಿ ಮಿನಿ ಟ್ರಕ್ ವಿಭಾಗದಲ್ಲಿ 68 ಪ್ರತಿ ಶತದಷ್ಟು ದೊಡ್ಡ ಮಾರುಕಟ್ಟೆ ಪಾಲನ್ನು ಹೊಂದಿದೆ ಹಾಗೂ ಒಟ್ಟಾರೆಯಾಗಿ 2 ದಶಲಕ್ಷ ಯೂನಿಟ್ಗಳನ್ನು ಮಾರಾಟ ಮಾಡಿದೆ .

ಟಾಟಾ ಏಸ್ ಗೋಲ್ಡ್ ಸ್ಟ್ಯಾಂಡರ್ಡ್ ಮಾದರಿಯಿಂದ ಒಂದೇ ವಿನ್ಯಾಸ ಹಾಗೂ ಉಪಯುಕ್ತವಾದ ಒಳಾಂಗಣವನ್ನು ಹೊಂದಿದೆ, ಉಪಭೋಗಿಗಳಿಗಾಗಿ ದಕ್ಷತೆಯನ್ನು ಸುಧಾರಿಸಲಾಗಿದೆ. 702ಸಿಸಿ ಡಿಐ ಡೀಸೆಲ್ ಐಡಿಐ ಎಂಜಿನ್ನಿಂದ ಪಾವರ್ ಬರುತ್ತದೆ. ಟಾಟಾ ಏಸ್ ಅದರ ನಿರ್ವಹಣೆ, ಕಡಿಮೆ ನಿರ್ವಹಣಾ ವೆಚ್ಚ ಹಾಗೂ ಉದ್ಯಮಗಳಲ್ಲಿನ ಹೆಚ್ಚಿನ ಆದಾಯದ ಸುಲಭತೆಗಾಗಿ ಮೆಚ್ಚುಗೆ ಪಡೆದಿದ್ದು, ವಾಹನ ತಯಾರಕರು ಇದು ಏಸ್ ಗೋಲ್ಡ್ನಲ್ಲಿಯೂ ಸಹ ಮುಂದುವರಿಸಲ್ಪಟ್ಟಿದೆ ಎಂದು ಹೇಳುತ್ತಾರೆ. ಏಸ ಶ್ರೇಣಿಯು ದೇಶದಾದ್ಯಂತದ ಉದ್ಯಮಿಗಳು ಹಾಗೂ ಮಾರ್ಕೆಟ್ ಲೋಡ್ ಆಪರೇಟರ್ಗಳನ್ನು ಲಕ್ಷದಲ್ಲಿರಿಸಿಕೊಂಡಿದೆ.

ಹೊಸ ಟಾಟಾ ಏಸ್ ಗೋಲ್ಡ್ನ ಬಿಡುಗಡೆಯ ಬಗ್ಗೆ ಮಾತನಾಡಿದ ಟಾಟಾ ಮೋಟಾರ್ಸ್ - ಅಧ್ಯಕ್ಷರು, ಕಮಿರ್ಷಿಯಲ್ ಬಿಸ್ನೆಸ್ ಯೂನಿಟ್, ಗಿರಿಶ್ ವಾಘ್, ಟಾಟಾ ಮೋಟಾರ್ಸ್ ತನ್ನ ವೈವಿಧ್ಯಮಯ ಪೋರ್ಟ್ಫೋಲಿಯೊದೊಂದಿಗೆ ಭಾರತದಲ್ಲಿ ಸ್ಮಾಲ್ ಕಮರ್ಷಿಯಲ್ ವೆಹಿಕಲ್ ಮಾರುಕಟ್ಟೆಯನ್ನು ರಚಿಸಲು ಹಾಗೂ ವಿಸ್ತರಿಸಲು ಪ್ರವರ್ತಕವಾಗಿದೆ. 68 ಪ್ರತಿ ಶತದ ಮಾರುಕಟ್ಟೆ ಪಾಲಿನೊಂದಿಗೆ, ಟಾಟಾ ಮೋಟಾರ್ಸ್ ಮಿನಿ ಟ್ರಕ್ ವಿಭಾಗದಲ್ಲಿ ಮಾರುಕಟ್ಟೆ ಲೀಡರ್ ಆಗಿ ಮುಂದುವರಿದಿದೆ. 2 ದಶಲಕ್ಷಗಳಿಗೂ ಹೆಚ್ಚು ವಾಹನಗಳು ರಸ್ತೆಯ ಮೇಲೆ ಓಡಾಡುವುದರೊಂದಿಗೆ, ಟಾಟಾ ಏಸ್ ಗ್ರಾಹಕರೊಂದಿಗೆ ಸಾಟಿಯಿಲ್ಲದ ಹಾಗೂ ಬಲವಾದ ಭಾವನಾತ್ಮಕ ಸಂಪರ್ಕವನ್ನು ಆನಂದಿಸುತ್ತದೆ.’’ ಎಂದು ಹೇಳಿದರು."

ಟಾಟಾ ಮೋಟಾರ್ ವಿವಿಧ ಬಳಕೆಗಳಿಗಾಗಿ ಏಸ್ ಪ್ಲ್ಯಾಟ್ಫಾರ್ಮ್ಅನ್ನು ಆಧಾರವಾಗಿಸಿಕೊಂಡು ಸುಮಾರು 15 ವಾಹನಗಳನ್ನು ಮಾರಾಟಮಾಡುತ್ತದೆ ಹಾಗೂ ವಿವಿಧ ಎಂಜಿನ್ಗಳಿಂದ ನಡೆಸಲ್ಪಡುತ್ತದೆ. ಈ ವಾಹನ ತಯಾರಕರ ವಾಣಿಜ್ಯ ವಾಹನದ ಉದ್ಯಮಗಳು 1800ಕ್ಕೂ ಹೆಚ್ಚು ಸರ್ವಿಸ್ ಕೇಂದ್ರಗಳು ಹಾಗೂ ಪ್ರತಿ 62 ಕಿ.ಮೀಗಳಲ್ಲಿ ಒಂದು ವರ್ಕ್ಶಾಪ್ನೊಂದಿಗೆ ದೇಶದಾದ್ಯಂತ ವ್ಯಾಪಕ ವ್ಯಾಪ್ತಿಯನ್ನು ಹೊಂದಿದೆ. ಕಂಪನಿಯು 24x7 ಬ್ರೇಕ್ಡೌನ್ ಅಸಿಸ್ಟೆನ್ಸ್ ಪ್ರೋಗ್ರಾಂ- ಟಾಟಾ ಅಲರ್ಟ್ ಅನ್ನು ಒಳಗೊಂಡು ಏಸ್ ಗೋಲ್ಡ್ ಗ್ರಾಹಕರಿಗಾಗಿ ಮೌಲ್ಯಾಧಾರಿತ ಸೇವೆಗಳ ಸಮೂಹವನ್ನು ಸಹ ನೀಡುತ್ತದೆ. ಟಾಟಾ ಡಿಲೈಟ್ ಸಹ ಇದೆ, ಇದು ಒಂದು ಲಾಯಲ್ಟಿ ಕಾರ್ಯಕ್ರಮವಾಗಿದೆ ಹಾಗೂ ಇದು ಉಚಿತ ವಿಮೆ, ಲಾಯಲ್ಟಿ ಅಂಕಗಳನ್ನು ಮರಳಿಪಡಯುವಿಕೆ ಮುಂತಾದವುಗಳನ್ನೊಳಗೊಂಡ ಪ್ರಯೋಜನಗಳ ಸಮೂಹವನ್ನು ನೀಡುತ್ತದೆ. ಒಳಗೊಂಡಿರುವ ಇತರ ಸೇವೆಗಳು -ಟಾಟಾ ಝಿಪ್ಪಿ - ಕಾಲದ ಮಿತಿಯಲ್ಲಿ ರಿಪೇರಿ ಬದ್ಧತೆ ಹಾಗೂ ಟಾಟಾ ಕವಚ್ ಕಾಲದ ಮಿತಿಯಲ್ಲಿ ಎಕ್ಸಿಡೆಂಟ್ ರಿಪೇರಿ ಭರವಸೆ.

ಇತ್ತೀಚಿನ ಆಟೋ ಸಮಾಚಾರ ಹಾಗೂ ವಿಮರ್ಶೆಗಳಿಗಾಗಿ, ಟ್ವಿಟರ್, ಫೇಸ್ಬುಕ್ನಲ್ಲಿ ಕಾರ್ ಹಾಗೂ ಬೈಕ್ ಅನ್ನು ಅನುಸರಿಸಿ ಹಾಗೂ ನಮ್ಮ ಯೂಟ್ಯೂಬ್ ಚ್ಯಾನಲ್ಗೆ ಚಂದಾದಾರರಾಗಿ.

Source : - https://phuketnews.easybranches.com/story/tata-ace-gold-mini-truck-launched-in-india-priced-at-rs-3-75-lakh-271065