press release
ಪತ್ರಿಕಾ ಬಿಡುಗಡೆ

20 ಲಕ್ಷಕ್ಕಿಂತ ಹೆಚ್ಚಿನ ಟಾಟಾ ಏಸ್ ಮಾರಾಟ: ಪ್ರತಿ ಮೂರು ನಿಮಿಷಗಳಿಗೊಮ್ಮೆ ಗ್ರಾಹಕರು ಒಂದು ವಾಹನ ಖರೀದಿಸುತ್ತಿದ್ದಾರೆ

2018ರ ನವಂಬರ್ 27ರಂದು ಬಿಡುಗಡೆಯಾದದ್ದು

ಟಾಟಾ ಮೋಟಾರ್ಸ್ ತನ್ನ ಅತ್ಯಂತ ಸುಪ್ರಸಿದ್ಧ ಸಣ್ಣ ವಾಣಿಜ್ಯ ವಾಹನವಾದ ಟಾಟಾ ಏಸ್ ನ ಯಶಸ್ಸನ್ನು ಆಚರಿಸಲು ಹೊಸ “ತೀನ್ ಕಾ ತ್ಯೋಹಾರ್” ಪ್ರಚಾರಾಂದೋಲನವನ್ನು ಘೋಷಿಸಿದೆ. ಇಲ್ಲಿಯವರೆಗೆ ಸಂಸ್ಥೆಯು 0 ಲಕ್ಷಕ್ಕಿಂತ ಹೆಚ್ಚಿನ ವಾಹನಗಳನ್ನು ಮಾರಾಟ ಮಾಡಿದೆ. ಪ್ರತಿ ಮೂರು ನಿಮಿಷಗಳಿಗೊಮ್ಮೆ ಏಸ್ ಕುಟುಂಬದಿಂದ ಒಂದು ಸಣ್ಣ ವಾಣಿಜ್ಯ ವಾಹನ (ಎಸ್ ಸಿವಿ) ಮಾರಾಟವಾಗುತ್ತಿದೆ. ಈ ಸಾಧನೆಯನ್ನು ಆಚರಿಸುತ್ತಾ, ಸಂಸ್ಥೆಯು ಮೂರು ತನ್ನ ಎಸ್ ಸಿ ವಿ ಖರೀದಿದಾರರಿಗೆ ಮೂರು ಆಕರ್ಷಕ ಕೊಡುಗೆಗಳನ್ನು ಘೋಷಿಸಿದೆ.

ಪ್ರಸ್ತುತ ಹಬ್ಬದ ಋತುವಿನಲ್ಲಿ ಖರೀದಿಸಲಾಗುವ ಪ್ರತಿ ಟಾಟಾ ಮೋಟಾರ್ಸ್ ಎಸ್ ಸಿ ವಿ ವಾಹನದ ಮೇಲೆ ಖರೀದಿದಾರರು ಒಂದು ಉಚಿತ ಬಂಗಾರದ ಕಾಸು, ರೂ. 10 ಲಕ್ಷದವರೆಗೆ ವೈಯಕ್ತಿಕ ವಿಮೆ, ಮತ್ತು ವಾಹನವನ್ನು ಯಾವ ಪ್ರದೇಶದಲ್ಲಿ ಖರೀದಿಸಲಾಗಿದೆ ಎಂಬುದನ್ನು ಅವಲಂಬಿಸಿ, ಆಕರ್ಷಕ ಮಾಸಿಕ ಗ್ರಾಹಕ ಯೋಜನೆಯನ್ನು ಪಡೆದುಕೊಳ್ಳುವರು ಇಡೀ ಎಸ್ ಸಿ ವಿ ಶ್ರೇಣಿಯ ವಾಣಿಜ್ಯ ವಾಹನಗಳಾದ್ಯಂತ ನವಂಬರ್ 30ರವರೆಗೆ ಈ ಕೊಡುಗೆಯು ಮಾನ್ಯವಾಗಿದ್ದು, ಇದು ಹೊಸದಾಗಿ ಪರಿಚಯಿಸಲಾಗಿರುವ ಟಾಟಾ ಏಸ್ ಗೋಲ್ಡ್ ಅನ್ನೂ ಒಳಗೊಂಡಿದೆ.

ಇಡೀ ಎಸ್ ಸಿ ವಿ ಶ್ರೇಣಿಯ ವಾಣಿಜ್ಯ ವಾಹನಗಳಾದ್ಯಂತ ನವಂಬರ್ 30ರವರೆಗೆ ಈ ಕೊಡುಗೆಯು ಮಾನ್ಯವಾಗಿದ್ದು, ಇದು ಹೊಸದಾಗಿ ಪರಿಚಯಿಸಲಾಗಿರುವ ಟಾಟಾ ಏಸ್ ಗೋಲ್ಡ್ ಅನ್ನೂ ಒಳಗೊಂಡಿದೆ.

ಈ ಪ್ರಚಾರಾಂದೋಲನದ ಬಗ್ಗೆ ಮಾತನಾಡುತ್ತಾ, ಟಾಟಾ ಮೋಟಾರ್ಸ್ ನ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾದ ಶ್ರೀ ಆರ್.ಟಿ. ವಾಸನ್, “005ರಲ್ಲಿ ಪರಿಚಯಿಸಲ್ಪಟ್ಟಾಗಿನಿಂದಲೂ ಟಾಟಾ ಏಸ್ ಭಾರತದ ಎಸ್ ಸಿವಿ ವರ್ಗಗಳ ಪ್ರಥಮಾನ್ವೇಷಕನಾಗಿರುವುದಷ್ಟೇ ಅಲ್ಲದೆ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಉದ್ಯಮದ ಸಾವಿರಾರು ಉದ್ಯಮಿಗಳು ತಮ್ಮ ವ್ಯಾಪಾರ ಮಹಾತ್ವಾಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ನೆರವಾಗಿದೆ.” ಎಂದರು.

"ಪ್ರತಿ ಮೂರು ನಿಮಿಷಗಳಿಗೊಮ್ಮೆ ಒಂದು ಟಾಟಾ ಏಸ್ ವಾಹನ ಮಾರಾಟವಾಗುತ್ತಿರುವ ಅಭೂತಪೂರ್ವ ಸಾಧನೆಯಿಂದಾಗಿ ನಾವು ಹೊಸ ಗ್ರಾಹಕರಿಗಾಗಿ ಕೊಡುಗೆಗಳ ಸರಣಿಯನ್ನೇ ಪರಿಚಯಿಸಲು ನಿರ್ಧರಿಸಿದೆವು.ಈ ಪ್ರಚಾರಾಂದೋಲನದ ಸುತ್ತ ಹರಡಿಕೊಂಡಿರುವ ಸುದ್ದಿ ಈಗಾಗಲೇ ಅನೇಕ ಶೋರೂಮ್ ಗಳಲ್ಲಿನ ಗ್ರಾಹಕ ಭೇಟಿಯ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿದೆ. ಹಬ್ಬದ ಋತುವಿನ ಆರಂಭ ಮತ್ತು ಈ ಎರಡು ತಿಂಗಳುಗಳಲ್ಲಿ ಪ್ರತಿ ಎಸ್ ಸಿ ವಿ ಖರೀದಿಯ ಏಲೆ ಟಾಟಾ ಮೋಟಾರ್ಸ್ ಒದಗಿಸುತ್ತಿರುವ ಆಕರ್ಷಕ ಬಹುಮಾನಗಳ ಕಾರಣದಿಂದಾಗಿ ಮಾರಾಟಗಳು ಹೆಚ್ಚಾಗುವ ನಿರೀಕ್ಷೆ ಹೊಂದಿದ್ದೇವೆ..” ಎಂದು ಅವರು ಸೇರಿಸಿದರು.

ಸಂಭಾವ್ಯ ಗ್ರಾಹಕರನ್ನು ಹೊರಗೆಳೆದು ತರುವ ಸಲುವಾರಿ ಈ ಹಬ್ಬದ ಅವಧಿಯಲ್ಲಿ ಟಾಟಾ ಮೋಟಾರ್ಸ್ ಮುದ್ರಣ, ರೇಡಿಯೋ ಹಾಗು ಡಿಜಿಟಲ್ ಮಾಧ್ಯಮಗಳ ಮೂಲಕ ಮಾರುಕಟ್ಟೆ ಪ್ರಚಾರಾಂದೋಲನ ಆರಂಭಿಸಿದೆ. ವರ್ಗದಲ್ಲೇ ಅತ್ಯುತ್ತಮವಾದ ಉತ್ಪನ್ನ ಮತ್ತು ಸೇವಾ ಅನುಭವಗಳನ್ನು ನೀಡುವ ತನ್ನ ವಚನವನ್ನು ಅದು ಮುಂದುವರಿಸುತ್ತದೆ

ವೈವಿಧ್ಯಮಯ ಪರಿಸ್ಥಿತಿಗಳಲ್ಲಿ ಅತ್ಯುತ್ಕೃಷ್ಟ ಸುರಕ್ಷತೆ ಮತ್ತು ಗರಿಷ್ಟ ಕಾರ್ಯಕ್ಷಮತೆ ನೀಡುವ ಏಶ್ ಶ್ರೇಣಿಯ ಸಣ್ನ ವಾನಿಜ್ಯ ವಾಹನಗಳು ಆರಾಮದಾಯಕವಾಗಿವೆ ಮತ್ತು ನಿರ್ವಹಿಸಲು ಸುಲಭ. ಇ-ಕಾಮರ್ಸ್ ಸರಬರಾಜಿನಿಂದ ಹಿಡಿದು, ಶುದ್ಧ ಭಾರತಕ್ಕಾಗಿ ಸ್ವಚ್ಛ ಭಾರತ ದೃಷ್ಟಿಕೋನವನ್ನು ಎತ್ತಿಹಿಡಿಯುವವರೆಗೆ, ವಿವಿಧ ವ್ಯಾಪಾರ ಅಗತ್ಯಗಳಿಗಾಗಿ ಈ ಶ್ರೇಣಿಯನ್ನು ಮಾರ್ಪಡಿಸಿಕೊಳ್ಳಬಹುದು.”

Source : - https://www.marketwatch.com/press-release/india-tata-motors-ushers-in-the-festive-season-introduces-teen-ka-tyohaar-a-special-offer-for-small-commercial-vehicle-buyers-2018-11-17